ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಅಜಿ೯ ಆಹ್ವಾನ 2023

About Us
ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಅಜಿ೯ ಆಹ್ವಾನ
ಮಡಿಕೇರಿ ಅ.17 - ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಅಕ್ಟೋಬರ್ 16 ರಿಂದ 24 ರವರೆಗೆ ನಗರದ ಗಾಂಧಿ ಮೈದಾವದಲ್ಲಿ ಆಯೋಜಿತ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ.

ಕಲಾವಿದರು, ಕಲಾತಂಡಗಳು ಅಜಿ೯ ನಮೂನೆಯನ್ನು madikeridasara.com ವೆಬ್ ಸೈಟ್ ನಿಂದ ಪಡೆದುಕೊಂಡು ಸೆಪ್ಟಂಬರ್ 26 ರೊಳಗಾಗಿ madikeridasara@gmail.com ಇಮೇಲ್ ಮೇಲ್ ಮಾಡಬೇಕು. ಅಥವಾ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಕೇರಾಫ್ ಮಡಿಕೇರಿ ನಗರ ದಸರಾ ಸಮಿತಿ ಕಛೇರಿಗೆ ಸಲ್ಲಿಸಬೇಕಾಗಿದೆ. ನಿಗಧಿತ ದಿನಾಂಕದ ನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ. ಅಜಿ೯ ಸಲ್ಲಿಸುವವರು ನಿಗಧಿ ನಮೂನೆಯಲ್ಲಿಯೇ ಮಾಹಿತಿ ನೀಡುವಂತೆ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪಕ೯ ತೆನ್ನಿರಾ ಮೈನಾ. ಸಂಚಾಲಕರು, ಸಾಂಸ್ಕೖತಿಕ ಸಮಿತಿ 9449156215 , ಕುಡೆಕಲ್ ಸಂತೋಷ್ 8762110948
ಕಲಾವಿದರು, ಕಲಾತಂಡಗಳು ಕೆಳಗಿನ ಲಿಂಕ್ ಇಂದ ಅಜಿ೯ ನಮೂನೆಯನ್ನು ಪಡೆದುಕೊಂಡು ಸೆಪ್ಟಂಬರ್ 26 ರೊಳಗಾಗಿ madikeridasara@gmail.com ಇಮೇಲ್ ಮೇಲ್ ಮಾಡಬೇಕು.
Download form/ಇಲ್ಲಿ ಅಜಿ೯ ನಮೂನೆ ಡೌನ್ಲೋಡ್ ಗಮನಿಸಿ .
1. ಕಲಾವಿದರು, ಕಲಾತಂಡಗಳು ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ನಿಗಧಿ ಮಾಡಿರುವ ಸಮಯಕ್ಕೆ ಅನುಗುಣವಾಗಿ ಕಲಾಪ್ರದಶ೯ನ ನೀಡಬೇಕು.
2. ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ನೀಡುವ ಸರದಿಯಂತೆಯೇ ಕಲಾತಂಡಗಳು, ಕಲಾವಿದರು ಕಾಯ೯ಕ್ರಮ ನೀಡತಕ್ಕದ್ದು.
3. ಕಲಾಪ್ರದಶ೯ನಕ್ಕೆ ನಿಗಧಿಪಡಿಸಿದ ದಿನದಂದು ನಿಗಧಿತ ಸಮಯಕ್ಕೆ 1 ಗಂಟೆ ಮುಂಚಿತವಾಗಿ ಕಲಾವಿದರು, ಕಲಾತಂಡಗಳು ತಮ್ಮ ಹಾಜರಾತಿಯನ್ನು ಸಮಿತಿ ಸದಸ್ಯರಿಗೆ ತಿಳಿಸಬೇಕು.
4. 1 ತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು. ಸೋಲೋ ಪ್ರದಶ೯ನಕ್ಕೆ ಅವಕಾಶ ಇರುವುದಿಲ್ಲ.
5. ಕಲಾವಿದರಿಗೆ ಊಟ, ವಸತಿ ಸೌಲಭ್ಯ ಇರುವುದಿಲ್ಲ.
6.. ಅಜಿ೯ಯನ್ನು ಸಲ್ಲಿಸಿದವರು ಸಮಿತಿ ಸದಸ್ಯರಿಗೆ ವೈಯಕ್ತಿಕ ಕರೆ ಮಾಡಿ ಪ್ರಭಾವ ಬೀರುವಂತಿಲ್ಲ.
7.ಸಮಯಾವಕಾಶ ಆದರಿಸಿ ಕಲಾಪ್ರದಶ೯ನಕ್ಕೆ ಅವಕಾಶ ನೀಡಲಾಗುತ್ತದೆ. ಕಲಾಪ್ರದಶ೯ನಕ್ಕೆ ಅವಕಾಶ ಲಭಿಸಿದ ತಂಡಕ್ಕೆ ಮಾಹಿತಿಯನ್ನು ನೀಡಲಾಗುತ್ತದೆ.
8. ಕಲಾತಂಡಗಳ ಕಾಯ೯ಕ್ರಮ ಮೊಟಕುಗೊಳಿಸುವ, ರದ್ದುಗೊಳಿಸುವ, ಸಮಯ ನಿಗಧಿಪಡಿಸುವ ಸಂಪೂಣ೯ ಹಕ್ಕು ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯದ್ದಾಗಿರುತ್ತದೆ.