ಮಡಿಕೇರಿ ದಸರಾ 2024 ರ ಕಛೇರಿ ಉದ್ಘಾಟನೆ ಗಣಪತಿ ಹೋಮ ದೊಂದಿಗೆ ದಸರಾ ಕಾರ್ಯದಕ್ಷರು, ಸದಸ್ಯರು, ದಶ ಮಂಟಪ ಸಮಿತಿ ಅಧ್ಯಕ್ಷರು ಅವರ ಪ್ರಸ್ತುತ ದಲ್ಲಿ ನಡೆಯಿತು
ಮಡಿಕೇರಿ ದಸರಾ 2024 ರ ಕಛೇರಿ ಉದ್ಘಾಟನೆ ಗಣಪತಿ ಹೋಮ ದೊಂದಿಗೆ ದಸರಾ ಕಾರ್ಯದಕ್ಷರು, ಸದಸ್ಯರು, ದಶ ಮಂಟಪ ಸಮಿತಿ ಅಧ್ಯಕ್ಷರು ಅವರ ಪ್ರಸ್ತುತ ದಲ್ಲಿ ನಡೆಯಿತು
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇತೃತ್ವದಲ್ಲಿ ದಸರಾ ಸಮಿತಿಯಿಂದ ಆಹ್ವಾನ. ಅವರೊಂದಿಗೆ ಸಚಿವ ಶಿವರಾಜ್ ತಂಗಡಗಿ, ಯುವ ದಸರಾಕ್ಕೆ ಶಾಸಕ ಪ್ರದೀಪ್ ಈಶ್ವರ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ. ವೈ, ಖಜಾಂಚಿ ಅರುಣ್ ಶೆಟ್ಟಿ, ಸಮಿತಿ ಪ್ರಮುಖರಾದ ಸತೀಶ ಪೈ, ಲೋಕೇಶ್, ಪೌರಾಯುಕ್ತ ರಮೇಶ್ ಅವರಿಂದ ಆಹ್ವಾನ. ಆಯುಧ ಪೂಜಾ ದಿನ ಶುಕ್ರವಾರ ಮಡಿಕೇರಿ ದಸರಾಕ್ಕೆ ಬರಲಿರುವ ಡಿ.ಕೆ. ಶಿವಕುಮಾರ್.
ಮಡಿಕೇರಿ ಅ.09(ಕರ್ನಾಟಕ ವಾರ್ತೆ):-ರಾಷ್ಟ್ರದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆ ಹೊಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೂ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ, ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಬೇಕು ಎಂದು ಸಲಹೆ ಮಾಡಿದರು. ಕತೆ, ಕವನ, ಕಾದಂಬರಿ, ಹಾಸ್ಯ ಲೇಖನಗಳು, ವಿಡಂಬಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವಕಾಶಗಳು ಹೆಚ್ಚು ಲಭಿಸಲಿವೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಪ್ರೋತ್ಸಾಹಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಸಂಗೀತ ನಿರ್ದೇಶಕ ಎಂ.ಆರ್.ಚರಣ್ ರಾಜ್ ಅವರು ಮಾತನಾಡಿ ಸಾಹಿತ್ಯ ಮತ್ತು ಸಂಗೀತಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳು ಪ್ರತಿಯೊಬ್ಬರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕಲೆ, ಸಾಹಿತ್ಯ, ಸಂಗೀತ ವಿಚಾರಗಳು, ಆಲೋಚನೆಗಳು ಪ್ರಬುದ್ಧತೆಯನ್ನು ಹೆಚ್ಚಿಸುತ್ತವೆ. ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಅರುಣ್ ಕೊತ್ನಳ್ಳಿ ಅವರು ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾಕ್ಕೆ ವಿಶೇಷ ಸ್ಥಾನವಾಗಿದೆ. ಇದೊಂದು ರೀತಿ ಪ್ರಜಾಪ್ರಭುತ್ವ ಹಬ್ಬವಾಗಿದೆ ಎಂದು ಹೇಳಿದರು. ದಸರಾವು ಎಲ್ಲ ಜನರನ್ನು ಒಳಗೊಂಡ ಉತ್ಸವವಾಗಿದ್ದು, ನಾಡಿನ ಸಂಸ್ಕøತಿ ಮತ್ತು ಕಲೆಗಳನ್ನು ಪ್ರತಿಬಿಂಭಿಸುವ ದಸರಾವಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದವರಿಗೆ ಹೆಚ್ಚು ಹೆಚ್ಚು ಅವಕಾಶ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು. ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ಕೊಡಲಾಗಿದೆ. ಕವಿಗೋಷ್ಠಿಗಳು ಕವಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾತ್ರವಲ್ಲ. ಭಾμÉ ಬೆಳವಣಿಗೆಗೆ ಸಹಕಾರಿಯೂ ಹೌದು. ಜೀವನೋತ್ಸಾಹವನ್ನೂ ತುಂಬುತ್ತದೆ ಎಂದು ಹೇಳಿದರು. ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಕವನ ರಚನೆ ಆರಂಭಿಸಿದ ನಂತರವೂ ಭಾವನೆಗಳು ಅರಳುವಂತೆ ಇರಬೇಕು. ಒಂದು ಮಾತು ನೋಡಿ ಉದ್ಭವ ಆದರೆ ಅದು ಸಹಜ ಭಾವ. ಭಾವನೆಗಳ ಸಹಜತೆಯೊಂದಿಗೆ ಬದುಕಬೇಕು. ಪಕ್ವತೆ ಬೆಳೆಸಿಕೊಂಡುವಾದಷ್ಟು ಪರಿಪೂರ್ಣ ಆಗಿರಲು ಪ್ರಯತ್ನಿಸಬೇಕು. ಬರವಣಿಗೆ ಸಂದರ್ಭ ಇಹದ ಎಲ್ಲಾ ಜಂಜಡಗಳನ್ನು ಮರೆಯಬೇಕು. ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಮಾತನಾಡಿ ಕವನ ಎಲ್ಲಿ ಬೇಕಾದರೂ ಹುಟ್ಟಬಹುದು. ದುಃಖದಲ್ಲಿ ಅರಳುವ ಕವನಗಳು ಮನೋಜ್ಞವಾಗಿರುತ್ತದೆ ಎಂದರು. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಉಜ್ವಲ್ ರಂಜಿತ್, ನಗರ ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ. ಅವರು ಮಾತನಾಡಿದರು. ಮಡಿಕೇರಿ ನಗರ ದಸರಾ ಸಮಿತಿ ಹೊರತಂದಿರುವ ‘ಕಾವ್ಯೋದ್ಯಾನ’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವ ಈ ಬಾರಿ ಸಂಪ್ರದಾಯಿಕವಾಗಿ ನಡೆಯುತ್ತಿದು ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ನವರಾತ್ರಿ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ
ಅಕ್ಟೋಬರ್ ೧೧ ರಂದು ಆಯುಧ ಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ಆಯೋಜಿತವಾಗಿದ್ದು. ಲಾರಿ. ಬಸ್.ಕಾರ್. ಸೈಕಲ್.ಬೈಕ್. ಆಟೋ. ಟಾಟಾಏಸ್. ಜೀಪ್. ಪಿಕ್ಅಪ್. ಜೆಸಿಬಿ ಹಾಗೂ ಇನ್ನಿತರ ವಾಹನ ಅಲಂಕಾರ ಸ್ಪರ್ಧೆ ಜರುಗಲಿದೆ ಅಲಂಕೃತ ವಾಹನಗಳು ಸಂಜೆ 6 ಗಂಟೆಯ ಒಳಗೆ ಗಾಂಧಿ ಮೈದಾನದಲ್ಲಿ ಸೇರತಕ್ಕದ್ದು
ನವರಾತ್ರಿಯ ಪ್ರಯುಕ್ತ ಮಡಿಕೇರಿ ನಗರಾಲಂಕಾರ ಸ್ಪರ್ಧೆಯ ಅಂಗವಾಗಿ ನಗರದ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ಜರುಗಲಿದೆ
ಮಡಿಕೇರಿ ನಗರದ ದಶ ದೇವಾಲಯಗಳು. ಸರಕಾರಿ. ಅರೆ ಸರಕಾರಿ ಕಚೇರಿಗಳು. ವಿವಿಧ ಕಟ್ಟಡಗಳು. ಚಿನ್ನದ ಅಂಗಡಿ. ಬಟ್ಟೆ ಅಂಗಡಿ. ಬೇಕರಿ.ಹೋಟೆಲ್. ಬ್ಯಾಂಕ್. ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡಗಳಿಗೆ ವಿಜಯ ದಶಮಿಯ ದಿನ ತೀರ್ಪುಗಾರರು ಸ್ಥಳಕ್ಕೆ ತೆರಳಿ ತೀರ್ಪುಗಾರಿಕೆ ಪಡೆದು ಬಹುಮಾನ ನೀಡಲಾಗುವುದು.
ಈ ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿಕೊಳ್ಳುವವರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಎಂದು ಅಲಂಕಾರ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
ಅಲಂಕಾರ ಸಮಿತಿ ಉಪಾಧ್ಯಕ್ಷರಾದ ರವಿಗೌಡ 9611101070. ಸಹಕಾರ್ಯದರ್ಶಿ ಪ
ುನೀತ್ 70226 85868
ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂವ೯ಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅನಿಲ್, ಮಕ್ಕಳ ದಸರಾಕ್ಕೆ 11 ವಷ೯, ಮಹಿಳಾ ದಸರಾಕ್ಕೆ 7 ವಷ೯, ಜಾನಪದ ದಸರಾಕ್ಕೆ 5 ವಷ೯ ಆದ ಸಂದಭ೯ ಮಡಿಕೇರಿ ಶಾಸಕ ಡಾ ಮಂಥರ್ ಗೌಡ ಅವರ ಕಲ್ಪನೆಯಂತೆ ದಸರಾಕ್ಕೆ ಕಾಫಿ, ತೋಟಗಾರಿಕಾ ಕೖಷಿಯನ್ನೂಸೇಪ೯ಡೆಯಾಗಿಸಿಕೊಂಡು ವಿನೂತನ ಕಾಯ೯ಕ್ರಮ ರೂಪಿಸಲಾಗುತ್ತಿದೆ, ಶಾಸಕ ಮಂಥರ್ ಗೌಡ ಪ್ರಯತ್ನದ ಫಲವಾಗಿ ರಾಜ್ಯ ತೋಟಗಾರಿಕಾ ಇಲಾಖೆ , ಕೇಂದ್ರೀಯ ಕಾಫಿ ಮಂಡಳಿಯವರು ವಿವಿಧ ಮಳಿಗೆಗಳನ್ನು ತೆರೆಯಲಿದ್ದಾರೆ, ಕಾಫಿ ದಸರಾಕ್ಕೆ ಕಾಫಿಗೆ ಸಂಬಂಧಿಸಿದ ವಿವಿಧ ಬೆಳೆಗಾರರ ಸಂಘಸಂಸ್ಥೆಗಳ ಸಹಕಾರವನ್ನು ಫಡೆಯಲಾಗುತ್ತದೆ ಎಂದೂ ಅನಿಲ್ ಮಾಹಿತಿ ನೀಡಿದರು,ಅಕ್ಟೋಬರ್ 4 ರಂದು ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಚಾಲನೆ ದೊರಕಲಿದೆ, 5 ರಂದು ಮಕ್ಕಳ ದಸರಾ, 6 ರಂದು ಯುವದಸರಾ, 6 ಮತ್ತು 7 ರಂದು ಬೆಳಗ್ಗೆ ಕಾಫಿ ದಸರಾ ಉತ್ಸವ, 8 ರಂದು ಮಹಿಳಾ ದಸರಾ, , 9 ರಂದು ಕವಿಗೋಷ್ಟಿ, 10 ರಂದು ಜಾನಪದ ದಸರಾ, 11 ರಂದು ಆಯುಧಪೂಜೆ, 12 ರಂದು ವಿಜಯದಶಮಿ ಕಾಯ೯ಕ್ರಮಗಳು ಆಯೋಜಿತವಾಗಿದೆ ಎಂದೂ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಸಭೆಗೆ ಮಾಹಿತಿ ನೀಡಿದರು,
*ಡಾ.ಮಂತರ್ ಗೌಡ*..... ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಆಯೋಜಿತ ಕಾಫಿ ದಸರಾವನ್ನು ಯಶಸ್ವಿಗೊಳಿಸುವುದರೊಂದಿಗೆ ಕೃಷಿಕ ವರ್ಗಕ್ಕೆ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕೆಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ. ಮಡಿಕೇರಿ ದಸರಾ ಉತ್ಸವದಲ್ಲಿ ಅ.6 ಮತ್ತು 7 ರಂದು ಆಯೋಜಿತ ಕಾಫಿ ದಸರಾ ಸಂಬಂಧಿತ ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕ ಡಾ.ಮಂತರ್ ಗೌಡ, ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಜಾನಪದ ದಸರಾದಂತೆಯೇ ಕಾಫಿ ದಸರಾ ಕೂಡ ಜನಾಕರ್ಷಣೆ ಪಡೆಯಬೇಕು, ಜಿಲ್ಲೆಯಾದ್ಯಂತಲಿನ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕುವಂತಾಗಬೇಕು, ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳು, ಕೃಷಿ ಪದ್ದತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ, ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಕಾಫಿ ದಸರಾದಲ್ಲಿ ದೊರಕಬೇಕೆಂದು ಸಲಹೆ ನೀಡಿದರು, ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನೂ ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿಯನ್ನು ಬೆಳೆಗಾರರಿಗೆ ನೀಡುವಂತೆಯೂ ಶಾಸಕ ಮಂತರ್ ಗೌಡ ಸೂಚಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ನಿಂದ ಅ.5 ರಂದು ಮಕ್ಕಳ ದಸರಾ* .- ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅಕ್ಟೋಬರ್ 5 ರಂದು ಶನಿವಾರ ನಗರದ ಗಾಂಧಿ ಮೈದಾನದಲ್ಲಿ 11 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪಧೆ೯ಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ವಿದ್ಯಾಥಿ೯ಗಳಿಗಾಗಿ ಮಕ್ಕಳ ದಸರಾ ಸ್ಪಧೆ೯ಗಳು ಅ. 5 ರಂದು ಶನಿವಾರ ಬೆಳಗ್ಗೆ 9.30 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಪ್ರಾರಂಭವಾಗಲಿದೆ. ಮಕ್ಕಳ ಸಂತೆ ಮತ್ತು ಮಕ್ಕಳ ಅಂಗಡಿ - ಎಸ್ ಎಸ್ ಎಲ್ ಸಿ ಒಳಗಿನ ವಿದ್ಯಾಥಿ೯ಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಟ 5 ವಿದ್ಯಾಥಿ೯ಗಳು ಪಾಲ್ಗೊಳ್ಳಬಹುದು. ಸಂತೆಯಲ್ಲಿ ಗ್ರಾಮೀಣ ಪದಾಥ೯ಗಳ ಮಾರಾಟಕ್ಕೆ ಆದ್ಯತೆ ಇದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಟ ಇಬ್ಬರು ಸ್ಪಧಿ೯ಗಳಿಗೆ ಅವಕಾಶವಿದೆ. ಮಕ್ಕಳ ಮಂಟಪ - 10 ನಿಮಿಷದ ಪ್ರದಶ೯ನಾವಧಿಯುಳ್ಳ ಮಂಟಪ ಸ್ಪಧೆ೯ಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯಂಥ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದಶ೯ನ ನೀಡುವಂತಿಲ್ಲ,